'ಅಲ್ಲ ಸಾರ್….' ಎಂದು ತನ್ನ ಕೊನೆಯ ವಾದವನ್ನು ಮಂಡಿಸಲು ಶುರುಮಾಡಿದ ರಾಹುಲ್ ಕೂಡಲೇ ಮಾತೇ ನಿಂತವನಂತೆ ಸುಮ್ಮನಾಗುತ್ತಾನೆ. ವಾರಾಂತ್ಯದ ನೇರ ಪ್ರಸಾರದ ಚರ್ಚಾಕೂಟಕ್ಕೆ ಸ್ಟುಡಿಯೋಗೆ ಆಗಮಿಸಿದ್ದ ಆತ ಅರ್ಧಘಂಟೆಯ ಕಾರ್ಯಕ್ರಮದಲ್ಲಿ ಅದಾಗಲೇ ತನ್ನ ಮುಂದಿದ್ದ ಸಿನಿಮಾರಂಗದ, ಸಮಾಜಸೇವೆಯ, ಸಾಹಿತ್ಯಲೋಕದ ಅತಿರಥ ಮಹಾರಥಿಗಳ ಬೆವರನ್ನು ಇಳಿಸಿದ್ದ! ಅವರುಗಳ ಒಂದೊಂದು ವಾದಕ್ಕೂ ಈತ ತನ್ನೆಲ್ಲ ಸಾಮಾನ್ಯಜ್ಞಾನವನ್ನು, ಒಂತಿಷ್ಟು ದುಬಾರಿ ಇಂಗ್ಲಿಷ್ ಪದಗಳನ್ನು ಬಳಸಿ ತದ್ವಿರುದ್ದವಾಗಿಯೇ ವಾದವನ್ನು ಮಂಡಿಸುತಿದ್ದ. ಏಕೋ ತನ್ನ ಕೊನೆಯ ವಾದವನ್ನು ಮಂಡಿಸುವಾಗ ಆತನ ಮಾತುಗಳು ಇದ್ದಕ್ಕಿದಂತೆ ನಿಂತಿತು. ಮುಂದೊಂದು ಪದವನ್ನೂ ಹೇಳುವ ಮುನ್ನ ಮನಸ್ಸೇಕೋ ತಪ್ಪಿತಸ್ಥ ಭಾವವನ್ನು ತಳೆಯಿತು. ಒಮ್ಮೆಲೇ ತನ್ನ ಕಾಲೇಜಿನ ಕಾರ್ಯಕ್ರಮವೊಂದರ ನೆನಪು ಆತನ ಕಣ್ಮುಂದೆ ಬಂದುಬಿಡುತ್ತದೆ.
****
ಕಿಕ್ಕಿರಿದು ತುಂಬಿದ್ದ ಆಡಿಟೋರಿಯಂನಲ್ಲಿ ಅಂದು ಸಂಗೀತ ಹಾಗು ಚಿತ್ರಕಲೆಯ ಬಗೆಗಿನ ಕಾರ್ಯಕ್ರಮಗಳಿದ್ದವು. ಕಾರ್ಯಕ್ರಮಗಳು ಯಾವುದಿದ್ದರೂ ಕ್ಲಾಸ್ಸಿಗೆ ಬಂಕಾಕುವ ಕಾರ್ಯಕ್ರಮವಂತೂ ಬಹಳಷ್ಟು ಮಂದಿ ವಿದ್ಯಾರ್ಥಿಗಳಿಗೆ ಪರಿಪಾಠವಾಗಿದ್ದಿತು. ಆದರೆ ಹೀಗೆಯೇ ಬಂಕಾಕಿ ಕ್ಯಾಂಪಸ್ನ ಕ್ಯಾಂಟೀನಿನಲ್ಲಿ ಹಳಸಲು ಹವಣಿಸುತ್ತಿದ್ದ ಬಜ್ಜಿ ಹಾಗು ನೀರಿಗೆ ಹಾಲನು ಬೆರೆಸಿದ್ದ ಟೀಯನ್ನು ಕುಡಿಯುವ ಕಾಯಕದಲ್ಲಿ ಮಗ್ನರಾಗಿದ್ದ ಗುಂಪೊಂದನ್ನು ಕಾಲೇಜಿನ ಶಿಕ್ಷಕರ ಇಲಾಖೆ ರೆಡ್ ಹ್ಯಾಂಡಿನಲ್ಲಿ ಹಿಡಿದಾಗಿನಿಂದಲೂ ಬಂಕ್ ಮಾಡುವ ವಿದ್ಯಾರ್ಥಿ ಮಹಾಶಯರುಗಳೆಲ್ಲ ಹೀಗೆಯೇ ಆಡಿಟೋರಿಯಂನಲ್ಲಿ ಅವಿತು ಕೂರುವುದುಂಟು. ಆದರೆ ಅಂದಿನ ಕಿಕ್ಕಿರಿದ ಜನಸ್ತೋಮದಲ್ಲಿ ವಿದ್ಯಾರ್ಥಿಗಳಲ್ಲದೆ ಶಿಕ್ಷಕರೂ ಬಂದಿದ್ದದ್ದು ವಿದ್ಯಾರ್ಥಿಗಳಿಗೆ ಒಂದು ಬಗೆಯ ನೈತಿಕ ಸ್ಥೈರ್ಯದೊಟ್ಟಿಗೆ ಬಂಡ ಆತ್ಮವಿಶ್ವಾಸವನ್ನೂ ಮೂಡಿಸಿತ್ತು. ಆದುದರಿಂದಲೋ ಏನೋ ಗಾಯಕರ ಗಾಯನಕ್ಕೆ 'ವಾ, ವ್ಹಾ..' ಎನ್ನುತಲೂ, ಚಿತ್ರಕಾರರ ಚಿತ್ರಗಳಿಗೆ ಎದ್ದುನಿಂತು ರಾಜಗಾಂಭೀರ್ಯದ ಚಪ್ಪಾಳೆಯನ್ನು ತಟ್ಟುತ್ತ ಶಿಕ್ಷಕರ 'ಸಿಂಪತಿ'ಯನ್ನು ಗಿಟ್ಟಿಸಿಕೊಳ್ಳಲು ಹವಣಿಸುತ್ತಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಸ್ಟೇಜಿನ ಮೇಲೆ ಬಂದ ಕೊನೆಯ ಸೆಮಿಸ್ಟರ್ನ ರೂಪ ಎಲ್ಲರಿಗೂ ವಂದಿಸುತ್ತಾ ಆಕೆ ತಾನು ಪ್ರಸ್ತುತಪಡಿಸಲೊಗುತ್ತಿರುವ ಕಾರ್ಯಕ್ರಮದ ಬಗೆಗೆ ವಿವರಿಸತೊಡಗುತ್ತಾಳೆ. ಕಾರ್ಯಕ್ರಮದ ಶುರುವಿನಲ್ಲಿ ಕಲಾರಸಿಕರಂತೆ ನಟಿಸುತ್ತಾ, ನಡುವಿನಲ್ಲಿ ಹುಡುಗಿಯರ ಗುಂಪಿನೆಡೆಗೆ ಚೇಷ್ಟೆಯನ್ನು ಮಾಡುತ್ತಾ, ಕೊನೆ ಕೊನೆಗೆ ಮುಂದಿನ ಕಾರ್ಯಕ್ರಮದ ರಸಸೊಗಸ್ಸನ್ನೇ ಬದಿಗಿರಿಸಿ ತಮ್ಮ ತನುಮನವನ್ನೆಲ್ಲ ಗಲಭೆಯ ಲೋಕವೊಂದರಲ್ಲಿ ಮುಳುಗಿಸಿ ಕಾಲಹರಣ ಮಾಡುತ್ತಿದ್ದ ವಿದ್ಯಾರ್ಥಿಗಳ ಗುಂಪು ಹುಡುಗಿಯೊಬ್ಬಳ ಮಧುರವಾಣಿಗೆ ಕೊಂಚ ಎಚ್ಚೆತ್ತಿದಂತೆ ಕಂಡಿತು. ಆಕೆ ಮುಂದುವರೆಸಿ ತಾನು ಸ್ಟೇಜಿನ ಮೇಲೆ ಮೊದಲು ಮೂರು ಬಗೆಯ ಚಿತ್ರಪಟಗಳನ್ನೂ ತದಾನಂತರ ಮೂರು ಬಗೆಯ ಶಾಸ್ತ್ರೀಯ ಸಂಗೀತವನ್ನೂ ಕೇಳಿಸುವುದಾಗಿ ಕೊನೆಯಲ್ಲಿ ಅವುಗಳ ರಚನಕಾರು ಯಾರೆಂದು ನೆರೆದಿರುವವರು ತಿಳಿಸಬೇಕಾಗಿ ಹೇಳುತ್ತಾಳೆ. ಅಲ್ಲಿಯವರೆಗೂ ಗುಜುಗುಡುತ್ತಿದ್ದ ಗುಂಪು ತರಗತಿಯಂತೆ ಇಲ್ಲಿಯೂ ಪ್ರೆಶ್ನೋತ್ತರದ ಪ್ರಸಂಗ ಎದುರಾಗಬಹುದೇನೋ ಎಂದು ಕೊಂಚ ಚಕಿತಗೊಂಡಿತು. ಎಲ್ಲಿ ರೂಪ ತಮ್ಮ ಬಳಿ ಬಂದು ಅದು ಯಾವ ರಾಗ, ಯಾವ ತಾಳ, ಗಾಯಕರು ಯಾರು, ಚಿತ್ರದ ಸಂದೇಶವೇನು ಎಂಬುದನ್ನು ಕೇಳುತ್ತಾಳೋ ಎಂದು ದಿಗಿಲುಬಿದ್ದರು. ನೆಲದೊಳಗೆ ಹುದುಗಿಕೊಂಡ ಇಲಿಯಂತಾದ ತಲೆಗಳನ್ನು ನೋಡಿಯೇನೋ ಎಂಬಂತೆ ನಗುತ್ತ ಆಕೆ ತಾನು ಯಾರನ್ನೂ ಬೊಟ್ಟು ಮಾಡಿ ಉತ್ತರವನ್ನು ಕೇಳುವುದಿಲ್ಲ, ಗೊತ್ತಿರುವವರು ನಿಂತೋ ಅಥವಾ ಕುಳಿತಲ್ಲಿಯೆ ಉತ್ತರವನ್ನು ಹೇಳಬಹುದು ಎಂದಾಗಲೇ ಗುಂಪಿಗೆ ಕೊಂಚ ಜೀವಬಂದತಾದುದು. ಮೊದಲು ಮೂರು ಹಿಂದೂಸ್ತಾನಿ ರಾಗಗಳನ್ನು ಹಾಕಿ ಗಾಯಕರನ್ನು ಗುರುತಿಸಿ ಎಂದಾಗ ಶಿಕ್ಷಕರ ಗುಂಪಿನಿಂದ ಒಂದೆರೆಡು ಸರಿ ಉತ್ತರಗಳು ಬಂದದ್ದು ಬಿಟ್ಟರೆ ಸಾವಿರ ಸಂಖ್ಯೆಯ ಆ ಮಹಾ ಗುಂಪಿನಲ್ಲಿ ಬೇರ್ಯಾವ ಉತ್ತರಗಳೂ ಮೂಡಲಿಲ್ಲ. ಮೂಡಿದರೂ ಅದು ಹಳೆ ಸಿನಿಮಾ ಹಾಡುಗಳನ್ನೇ ಶಾಸ್ತ್ರೀಯ ಸಂಗೀತವೆಂದುಕೊಂಡು ಆಶಾ ಬೋಸ್ಲೆ, ಲತಾ ಮಂಗೇಶ್ಕರ್ ಎಂಬ ತಿಳಿದವನು ಕಕ್ಕಾಬಿಕ್ಕಿಯಾಗುವ ಉತ್ತರಗಳಾಗಿದ್ದವೇ ವಿನ್ಹಾ ಅದು ಕೇಸರ್ ಬಾಯಿ ಕೇರ್ಕರ್ ನಿಂದ ಒಳಗೊಂದು ಗಿರಿಜಾ ದೇವಿ ಎಂಬುದಾಗಿರಲಿಲ್ಲ! ಇನ್ನು ಚಿತ್ರಪಟದ ಪ್ರೆಶ್ನೆಯಲ್ಲಿಯೂ ಅದೇ ಉಡಾಫೆಯ ಉತ್ತರಗಳು. ರವಿವರ್ಮನ ಚಿತ್ರಪಟವೊಂದನ್ನು ಯಾವನೋ ಹೋಲಿಕೆಯಿಲ್ಲದ ವ್ಯಕ್ತಿಯೊಟ್ಟಿಗೆ ತುಲನೆ ಮಾಡಿ ಇದು ಆತನ ಚಿತ್ರವೆಂದು ಹೇಳಿ ಗೊಳ್ ಎಂದು ನಕ್ಕಿದ ಗುಂಪನ್ನು ಕಂಡು ಸಿಟ್ಟು, ದುಃಖ, ಹತಾಶೆಗಳು ಒಟ್ಟೊಟ್ಟಿಗೆ ರೂಪಳಲ್ಲಿ ಮೂಡಿದವು. ಕೂಡಲೇ ಸ್ಟೇಜಿನ ಮೇಲೆ ಬಂದ ಆಕೆ 'ನಿಮಗೆಲ್ಲ ಕಲೆ, ಚಿತ್ರಕಲೆ ಎಂಬುದರ ಗುಲಗಂಜಿಯಷ್ಟು ತಿಳುವಳಿಕೆ ಅಥವಾ ಆಸಕ್ತಿ ಇರದಿರುವುದು ಮೊದಲೇ ತಿಳಿದಿದ್ದರೆ ಖಂಡಿತಾವಾಗಿಯೂ ನಾನು ಈ ಕಾರ್ಯಕ್ರಮವನ್ನು ನೆಡೆಸುತ್ತಿರಲಿಲ್ಲ. ನಮ್ಮ ದೇಶೀ ಕಲೆಗಳ ಮುಂದಿನ ಭವಿಷ್ಯವನ್ನು ನಾನಿಂದು ಕಣ್ಣಾರೆ ನೋಡಿದೆ. ಅಲ್ಲದೆ ಮತ್ತೊಂದು ವಿಷಯ, ಇದು ಎಲ್ಲರಿಗೂ ಉಪಯುಕ್ತವಾಗಬಹುದು ಕೇಳಿ. ನೀವು ಜನಸ್ತೋಮ ಒಂದಕ್ಕೆ ಯಾವುದಾದರೊಂದು ವಿಷಯವನ್ನು ಪ್ರಸ್ತುತಪಡಿಸುವಾಗ ನಿಮ್ಮ ಮುಂದಿರುವ ಆ ಗುಂಪು ನಿಮ್ಮ ವಿಚಾರಧಾರೆಯನ್ನು ಒಂದಿನಿತು ತಿಳಿಯಬಲ್ಲದಾಗಿರಬೇಕು, ನಿಮ್ಮ ಯೋಚನಾಲಹರಿಗೆ ಕೊಂಚವಾದರೂ ಸರಿಹೊಂದುವಂತಿರಬೇಕು. ಇಲ್ಲವೇ ನೀವುಗಳು ಆ ತಳಮಟ್ಟಕ್ಕೆ ತಲುಪಿ ನಿಮ್ಮ ವಿಷಯವನ್ನುಅವುಗಳಿಗೆ ತಿಳಿಸಬೇಕು. ಇಲ್ಲವಾದರೆ ಅದು ನಾನೊಬ್ಬನೇ ಬಲ್ಲವನು ಎಂಬೊಂದು ಕೆಟ್ಟ ಅಹಂನನ್ನು ಹುಟ್ಟುಹಾಕುವುದಲ್ಲದೆ ಪ್ರೇಕ್ಷಕರನ್ನೂ ಅಂಧಕಾರದಲ್ಲಿಯೇ ಇರಿಸುತ್ತದೆ' ಎಂದು ಹೇಳಿ ಸ್ಟೇಜಿನಿಂದ ಇಳಿದು ಹೊರನೆಡಯುತ್ತಾಳೆ. ಮೂರು ಘಂಟೆಯ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಮಹಾಮೌನವೊಂದು ಆಡಿಟೋರಿಯಂನನ್ನು ಆವರಿಸುತ್ತದೆ.
****
'ಹಲೋ.. ರಾಹುಲ್' ಎಂದ ಪಕ್ಕದ ಪಾನಾಲಿಸ್ಟ್ ನ ಸದ್ದಿಗೆ ವಿಚಲಿತನಾದ ರಾಹುಲ್ ಒಂದು ಕ್ಷಣ ಏನೇಳಬೇಕೆಂದು ಆರಿಯದಾಗುತ್ತಾನೆ. ತನ್ನ ಮುಂದಿದ್ದ ಗಾಜಿನ ಲೋಟದಿಂದ ಒಂದೆರೆಡು ಗುಟುಕು ನೀರನ್ನು ಕುಡಿದು, 'ಆಸೀನರಿರುವ ಎಲ್ಲ ಗಣ್ಯರಲ್ಲೂ ನಾನು ಕ್ಷಮೆಯಾಚಿಸಬಯಸುತ್ತೇನೆ. ನಾನು ಇಲ್ಲಿಯವರೆಗೂ ಹೇಳಿದ್ದನ್ನೆಲ್ಲ ಶುದ್ಧ ಅಪ್ರಭುದ್ದ ವಾದವೆಂದು ತಿಳಿದು ನನ್ನನ್ನು ಕ್ಷಮಿಸಬೇಕು. ಸೋಲಿಸುವ ಭರದಲ್ಲಿ, ಕೇಳುಗರಿಗೆ ರಂಜಿಸುವ ದೃಷ್ಟಿಯಿಂದಲೂ ಏನೋ ಸರಿ ತಪ್ಪು ಎಂದೆಣಿಸದೆ ವಾದವನ್ನು ಮಂಡಿಸಿದೆ. ನನ್ನ ಆತ್ಮಸಾಕ್ಷಿ ಏನೇಳಬಯಸುತ್ತಿದೆ ಎಂದು ನಾನು ಯೋಚಿಸಲೂ ಹೋಗಲಿಲ್ಲ. ನಾನು ಹೀಗೆ ಮಾಡದಿದ್ದರೆ ನಾನೊಬ್ಬನೇ ಬಲ್ಲವನು ಎಂಬೊಂದು ಕೆಟ್ಟ ಅಹಂನನ್ನು ಹುಟ್ಟುಹಾಕುವುದಲ್ಲದೆ ಪ್ರೇಕ್ಷಕರನ್ನೂ ಅಂಧಕಾರದಲ್ಲಿಯೇ ಇರಿಸುತ್ತದೆ ನನ್ನೀ ವಾದ. ತೋರ್ಪಡಿಕೆಗಷ್ಟೇ ಮಾಡುವ ಕಾರ್ಯದಿಂದ ನಮಗೆ ಮಜವೆನಿಸಬಹುದು ಆದರೆ ನೆಮ್ಮದಿ ಇರದ ಕಾರ್ಯ ಅದಾಗುತ್ತದೆ' ಎಂದು ಹೇಳಿ ಯಾರೊಬ್ಬರ ಮರುತ್ತರವನ್ನೂ ಕೇಳಿಸಿಕೊಳ್ಳದೆ ಅಲ್ಲಿಂದ ಎದ್ದು ಹೊರಡುತ್ತಾನೆ!!
ವಾರವೊಂದು ಸರಿಯಿತು. ಕಾಲೇಜು ಕ್ಯಾಂಪಸ್ಸಿನ ಹುಲ್ಲುಹಾಸಿನ ಮೇಲೆ ಕುಳಿತಿದ್ದ ಗುಂಪು ಅತ್ತ ಕಾಲೇಜಿನ ಒಳಗೂ ಹೊರಗು ಹೋಗುತ್ತಿದ್ದ ಹುಡುಗಿಯರ ಬಗ್ಗೆ ಚರ್ಚಿಸುತ್ತಾ ತನ್ನೊಳಗೆ ತಾನು ಮಗ್ನವಾಗಿದ್ದಿತು. ಗುಂಪಿನಲ್ಲಿ ಒಬ್ಬನಾಗಿದ್ದರೂ ಉಳಿದ ಸದಸ್ಯರಂತೆ ವ್ಯರ್ಥ ಕಾಲಹರಣ ಮಾಡದೇ ತೇಜಸ್ವಿಯವರ ಬುಕ್ಕೊಂದನ್ನು ಹಿಡಿದು ಓದುತ್ತಾ ಅಂಗಾತ ಮಲಗಿದ್ದ ರಾಹುಲ್. ಸ್ವಲ್ಪ ಸಮಯದ ನಂತರ ದೂರದಿಂದ ಬರುತ್ತಿದ್ದ ತರಗತಿಯ ಹುಡುಗೀಯರ ಗುಂಪನ್ನು ಕಂಡು ಒಬ್ಬರ ಮೇಲೊಬ್ಬರು ಬಿದ್ದಂತೆ ಹುಡುಗರ ಗುಂಪು ಅವರಲ್ಲಿಗೆ ಧಾವಿಸಿ ಮಾತಿಗಿಳಿಯತೊಡಗಿತು. ನೆನ್ನೆಯ ಕ್ಲಾಸಿನ ನೋಟ್ ಪುಸ್ತಕವೋ, ಜೀವಮಾನದಲ್ಲೇ ಕೇಳರಿಯದ ಗಣಿತದ ಸೂತ್ರವೊಂದರ ಅರ್ಥವೋ, ಲ್ಯಾಬ್ ರಿಪೋರ್ಟ್ ನ ಕಾಪಿಯೂ ಹೀಗೆ ಒಂದೊಂದೇ ಇಲ್ಲದ ಸಲ್ಲದ ನೆಪವನ್ನು ಒಡ್ಡಿ ಅಂದವಾಗಿ ಕಾಣುತ್ತಿದ್ದ ಗುಂಪಿನ ಹುಡುಗಿಯರನ್ನು ಸುತ್ತುವರೆಯಿತು ಪಡೆ. ರೂಪ ತರಗತಿಯಲ್ಲಿಯೇ ಮೊದಲು ಬರುವವಳಾಗಿದ್ದರೂ, ಯಾವೊಂದು ಕ್ಲಾಸ್ಸನ್ನೂ ಇಲ್ಲಿಯವರೆಗೆ ತಪ್ಪಿಸಿರಳಾದರೂ ಯಾರೊಬ್ಬರೂ ಗುಂಪಿನಲ್ಲಿದ್ದ ಆಕೆಯನ್ನು 'ಪೀಡಿಸ'ತೊಡಗದಿದ್ದರಿಂದ ಆಕೆ ರಾಹುಲ್ ಪುಸ್ತಕವನ್ನು ಓದುತ್ತಿದ್ದಲ್ಲಿಗೆ ಬಂದು ಕೂರುತ್ತಾಳೆ. ತೇಜಸ್ವಿಯರ ಕರ್ವಾಲೋ ಪುಸ್ತಕವನ್ನು ನೋಡಿ ಸಂತೋಷಗೊಂಡು, ಪುಸ್ತಕದ ಬಗ್ಗೆ, ಬರಹಗಾರರ ಬಗ್ಗೆ ತನ್ನ ಒಂದೆರೆಡು ಅಭಿಪ್ರಾಯವನ್ನೂ ಹೇಳುತ್ತಾಳೆ. ಟೀವಿ ಕಾರ್ಯಕ್ರಮಗಳಲ್ಲಿ ಬರುತ್ತಿದ್ದರಿಂದ ರಾಹುಲ್ ಕಾಲೇಜಿನ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಚಿರಪರಿಚಿತ. ಅದರಿಂದಲೋ ಏನೋ ಒಂದು ಬಗೆಯ ಸಂಕೋಚ ರೂಪಾಳ ಮಾತುಗಳಲ್ಲಿ ಕಾಣುತ್ತಿದ್ದವು. ಇಬ್ಬರು ಒಂದೇ ತರಗತಿಯವರಾದರೂ ಪಠ್ಯವಿಷಯಗಳ ವಿನ್ಹಾ ಬೇರೇನೂ ಮಾತಾಡಿರುವುದು ತೀರಾ ಅಪೂರ್ವ.
'ಮೊನ್ನೆ ನಿಮ್ಮ ಕಾರ್ಯಕ್ರಮ ನೋಡಿದೆ..ಅಷ್ಟ್ ಚೆನ್ನಾಗಿ ವಾದ ಮಂಡಿಸ್ತಾ ಇದ್ದೋರು ಅಚಾನಕ್ ಆಗಿ ಏಕೆ ಎದ್ದು ನೆಡೆದಿರಿ?' ಎಂದು ಕೇಳುತ್ತಾಳೆ.
ಕೆಲಕಾಲ ಸುಮ್ಮನಿದ್ದ ರಾಹುಲ್ 'ಅದಕ್ಕೆ ಕಾರಣ ನೀವೇ!' ಎನ್ನುತ್ತಾನೆ. ಪುಸ್ತಕದ ಮೇಲಿಟ್ಟಿದ್ದ ನೋಟವನ್ನು ಮಾತ್ರ ಒಂದಿನಿತೂ ಕದಲಿಸುವುದಿಲ್ಲ.
'ನಾನೇ?!' ಎಂದ ರೂಪಳ ಪ್ರೆಶ್ನೆಯಲ್ಲಿ ಕೂತುಹಲ ಹಾಗು ಆಶ್ಚರ್ಯ ಒಮ್ಮೆಲೇ ಮೂಡಿದವು. ಜೊತೆಗೆ ಎದೆಬಡಿತವೂ ಮುಗಿಲು ಮುಟ್ಟುವಂತೆ ಸದ್ದು ಮಾಡುತ್ತಿದ್ದದ್ದು ಆಕೆಗೆ ತಿಳಿಯಲೇ ಇಲ್ಲ.
'ನಿಮ್ಮ ಕಳೆದ ವಾರದ ಪೇಂಟಿಂಗ್ ಅಂಡ್ ಮ್ಯೂಸಿಕ್ ಪ್ರೋಗ್ರಾಮ್.. ಇಟ್ ಟಾಟ್ ಮಿ ಎ ಲಾಟ್' ಎನ್ನುತ್ತಾ ರಾಹುಲ್ ತನ್ನ ಓದನ್ನು ಮುಂದುವರೆಸುತ್ತಾನೆ.
ಕೊಂಚ ಸಮಯದ ನಂತರ 'ಕಲೆ ಎಂಬುದು ಸರ್ವರಿಗೂ ಏಕವಾಗಿರುವ ಹೊಂಗಿರಣ. ಆದರೆ ಎಲ್ಲರೂ ಒಮ್ಮೆಯೇ ಎಲ್ಲವನ್ನು ಕಲಿತು ಪಂಡಿತರಾಗಲಂತೂ ಸಾಧ್ಯವಿಲ್ಲ. ಹುಟ್ಟು, ಕುಟುಂಬ, ಸಮಾಜ, ಪರಿಸ್ಥಿತಿ ಹೀಗೆ ಹಲವಾರು ಅಂಶಗಳು ಒಂದು ಮನಸ್ಸಿನ ವಿಕಸದಲ್ಲಿ ಮುಖ್ಯಪಾತ್ರವನ್ನು ವಹಿಸುತ್ತವೆ. ನೀವು ರವಿವರ್ಮರ ಚಿತ್ರಪಟವೊಂದನ್ನು ತಂದು ಇದನ್ನು ಗುರುತಿಸಿ ಎಂದರೆ ಸಾಮನ್ಯರಾದ ನಮಗೆ ಹೇಗೆ ತಿಳಿಯಬೇಕು. ಜೀವಮಾನದಲ್ಲೇ ಕೇಳರಿಯದ ಕೇಸರ್ ಬಾಯಿ ಕೇರ್ಕರ್ ಅವರ ಧ್ವನಿಯನ್ನು ಪ್ರಸ್ತುತ ಪಡಿಸಿ ರಾಗವನ್ನು ಹೇಳಿ ಎಂದರೆ ದಿನವಿಡಿ ವಾಟ್ಸ್ ಆಪ್, ಫೇಸ್ಬುಕ್ ಎನ್ನುತ್ತಾ ಅಲೆದಾಡುವ ಯುವ ಸಮಾಜಕ್ಕೆ ರಾಗಗಳ ಸೂತ್ರಗಳು ಹೇಗೆ ಅರಿಯಬೇಕು? Infact, ಇಂದಿನ ಬಹುಪಾಲು ಚರ್ಚೆಗಳು, ಭಾಷಣಗಳು ಹೀಗೆಯೇ ಇರುತ್ತವೆ. ಎಲ್ಲೋ ಒಂದಿಷ್ಟು ಸೊ ಕಾಲ್ಡ್ ಬುದ್ದಿಜೀವಿಗಳು ದೇಶದ ರಾಜಧಾನಿಯ ಐಷಾರಾಮಿ ಹೋಟೆಲೊಂದರಲ್ಲಿ ಬಡವರ ಬಗ್ಗೆ, ಹಸಿದವರ ಬಗ್ಗೆ, ವಿಧವೆಯರ ಬಗ್ಗೆ, ದೇವಧಾಸಿಯರ ಬಗ್ಗೆ ಅಥವಾ ಸೈನ್ಯ ಹಾಗು ಸೈನಿಕರ ಬಗ್ಗೆ ಧುಬಾರಿ ಇಂಗ್ಲಿಷ್ ಪದಗಳಲ್ಲೇ ಮಾತನಾಡಿ ಮರೆಯಾಗುತ್ತಾರೆ. ಆ ಕಾರ್ಯಕ್ರಮವು ನಿಜವಾಗಿಯೂ ಹಸಿದ ಬಡವರಿಗಾಗಿ , ದೇವಧಾಸಿಯಾರಾದ ವಿಧವೆಯರಿಗಾಗಿ, ದೇಶಕ್ಕಾಗಿ ಪ್ರಾಣ ತೆತ್ತುವ ಸೈನಿಕರಿಗಾಗಿ ಆಗಿದ್ದರೆ ಕಾರ್ಯಕ್ರಮದ ಸಂದೇಶವನ್ನು ಅಂತವರಿಗೆ ತಲುಪಿಸುವ ಬಗೆಗೆ ಮೊದಲು ಯೋಚಿಸುತ್ತಿದ್ದರು. ಅವರ ಆ ಧುಬಾರಿ ಚರ್ಚೆಗಳು ಸಾಮನ್ಯರಾದವರಿಗೆ ಹೇಗೆ ತಿಳಿಯಬೇಕು? ಹತ್ತಿಪ್ಪತ್ತು ಜನ ಪ್ಯಾಶನ್ ಷೋ ಗಳ ಉಡುಪುಗಳನ್ನು ಧರಿಸಿ, ವಾದ ಮಂಡಿಸಿ, ಚರ್ಚಿಸಿ, ಕೊನೆಗೆ ಮನೆಗೆ ವಾಪಸ್ಸಾಗುವುದಾದರೆ ಏನು ಬಂತು? ಬದಲಾವಣೆ ಮೊದಲು ಆಡುವವರಲ್ಲಿ ಬಂದರಷ್ಟೇ ಅದು ನಂತರ ಕೇಳುವವರಲ್ಲಿ, ನೋಡುವವರಲ್ಲಿ ಮಿಳಿತಗೊಳ್ಳುತ್ತದೆ' ಎನ್ನುತ್ತಾನೆ.
ಅನತಿ ದೂರದಲ್ಲಿ ತನ್ನ ಗೆಳೆಯರ ಗುಂಪು ಸುಂದರ ಹುಡುಗಿಯರನ್ನು ನಿಮ್ಮ ಬಿಡಲೊಲ್ಲೆವು ಎಂಬಂತೆ ಸುತ್ತುವರೆದು ಮಾತಿಗಿಳಿದಿರುತ್ತಾರೆ.ರಾಹುಲ್ ನ ಉತ್ತರವನ್ನು ಅಥೈಸಿಕೊಂಡ ರೂಪ ಮತ್ತೇನು ಹೆಚ್ಚಾಗಿ ಆ ವಿಷಯದ ಬಗ್ಗೆ ಚರ್ಚಿಸುವುದಿಲ್ಲ.
ರಾಹುಲ್ ಮುಂದುವರೆಸಿ 'ಆ ದಿನ ಚಿತ್ರಕಲೆಯಲ್ಲಿ ಎರಡು ರವಿವರ್ಮನ ಚಿತ್ರಗಳಿದ್ದವು. ಮತ್ತೊಂದು ಆ ಮಟ್ಟಿನಲ್ಲದ್ದಾದರೂ ಇಷ್ಟವಾಗಿದ್ದಿತು. ನಿಮ್ಮಲ್ಲಿ ಆ ಚಿತ್ರಪಟ ಇದೆಯೇ, ಒಮ್ಮೆ ನೋಡಬೇಕು' ಎಂದು ಕೇಳುತ್ತಾನೆ. ಇದೆ ಎಂಬಂತೆ ರೂಪ ತಲೆಯನ್ನು ಆಡಿಸುತ್ತಾಳೆ.
'ಏನು.. ನಿಮ್ಮನ್ನು ಯಾವ ಹುಡುಗನೂ ಪ್ರೆಶ್ನೆ ಕೇಳೋದಿಲ್ವ' ಎಂದ ನಗುತ್ತಾ ಕೇಳಿದ ರಾಹುಲ್ನ ಪ್ರೆಶ್ನೆಗೆ ಏನು ಉತ್ತರಿಸಬೇಕೆಂದು ರೂಪಾಳಿಗೆ ತಿಳಿಯದಾಗುತ್ತದೆ. ಅಲ್ಲಿ ನೆಡೆಯುತ್ತಿದದ್ದು ಕೇವಲ ಸುಂದರತೆಯ ವ್ಯಾಮೋಹದ ಸಂಭಾಷಣೆ ಎಂಬುದು ಇಬ್ಬರಿಗೂ ತಿಳಿದಿರುತ್ತದೆ. ಬಣ್ಣ ಕೊಂಚ ಕಪ್ಪಾಗಿದ್ದು, ಮುಖದ ಮೇಲೆ ಅಲ್ಲಲ್ಲಿ ಮೊಡವೆಗಳಾಗಿ ತೀರಾ ಸಾಧಾರಣವಾಗಿ ಕಾಣುತಿದ್ದ ರೂಪಳ ರೂಪ ಸಾಮಾನ್ಯವಾಗಿಯೇ ಹುಡುಗರಿಗೆ ಅಷ್ಟೇನೂ ಹಿಡಿಸುತ್ತಿರಲಿಲ್ಲ. ಕೂಡಲೇ ಏನೋ ಅನಿಸಿದಂತಾಗಿ 'ಸಾರಿ, ನೀವ್ ಕೂತಿದ್ರೂ ನಾನ್ ಮಲ್ಕೊಂಡೆ ಇದ್ದೆ' ಎನ್ನುತ್ತಾ ಎದ್ದು ಕೂರುತ್ತಾನೆ. ಕೊಂಚ ಕಾಲ ಲೋಕಾರೂಢ ಮಾತುಕತೆಯನ್ನು ಆಡುತ್ತಾರೆ. ಇಬ್ಬರಲ್ಲೂ ಇದ್ದ ಕಲೆಯ ಬಗೆಗಿನ ಆಸಕ್ತಿ ಮಾತುಕತೆಯನ್ನು ಬಹಳ ಸಮಯದವರೆಗೆ ಮುಂದುವರೆಸಿಕೊಂಡು ಹೋಗುತ್ತದೆ. ಅಂತೂ ಯುದ್ಧವನ್ನು ಗೆದ್ದಷ್ಟೇ ಖುಷಿಯನ್ನು ಗಳಿಸಿಕೊಂಡು ಬಂದಿತು ಹುಡುಗಿಯರನ್ನು ಸುತ್ತುವರೆದಿದ್ದ ಗುಂಪು. ಪರಿಸ್ಥಿತಿ ಸಮ್ಮತಿಸಿದ್ದರೆ ಸಂಜೆಯವರೆಗೂ ರೂಪಾಳೊಟ್ಟಿಗೆ ಸಂಭಾಷಣೆಯಲ್ಲಿ ತೊಡಗುತ್ತಿದ್ದ ರಾಹುಲ್ ತನ್ನ ಗುಂಪಿನ ಸದಸ್ಯರು ಬಂದಾಗಲೇ ಕೊಂಚ ಮುಜುಗರ ಪಡುತ್ತಾನೆ. ಅಂತೆಯೇ ಆಕೆಯೂ ಮತ್ತೊಮ್ಮೆ ಸಿಗುವ ಎನ್ನುತ್ತಾ ಅಲ್ಲಿಂದ ಎದ್ದು ನೆಡೆಯುತ್ತಾಳೆ. ರೂಪ ಅತ್ತ ಕಡೆ ಹೋಗುವುದನ್ನೇ ಕಾಯುತಿದ್ದ ಗುಂಪಿನ ಒಬ್ಬ 'ಏನ್ ಆಟಿಟ್ಯೂಡ್ ಗುರು ಇವ್ಳಿಗೆ, ಏನ್ ಇವ್ಳ್ ಕೇಳಿದ್ದ್ ಪ್ರೆಶ್ನೆಗೆಲ್ಲ ಉತ್ತರ ಹೇಳ್ಬೇಕಂತೆ, ಇಲ್ಲಾ ಅಂದ್ರೆ ಎಲ್ಲರು ವೇಸ್ಟ್ ಅಂತೇ! ಒಳ್ಳೆ ಹಾಲ್ ಕುಡಿಯೋ ಮಕ್ಳು ಪೈಂಟ್ನ ಉಜ್ಜಾಡಿರೋ ಹಾಗೆ ಇರೋ ಫ್ರೇಮ್ ಅನ್ನು ಅದ್ ಏನ್ ಹೇಳುತ್ತದೆ, ಯಾರ್ ಬರೆದಿದ್ದು ಅಂತಾ ಗುರ್ತಿಸಬೇಕಂತೆ. ಸತ್ತವರ ಮುಂದೆ ಗೊಳೋ ಎಂದು ಅಳುವಂತೆ ಕೊಗುವ ಸದ್ದನ್ನು ರಾಗವೆಂದು ಅರ್ಥೈಸಿಕೊಂಡು ಅದನ್ನು ಕಂಡುಹಿಡಿಯಬೇಕಂತೆ. ಏನ್ ಕಾಮಿಡಿಯಪ್ಪ ಇವ್ಳದ್ದು' ಎಂದು ನಗುತ್ತಾನೆ. ಮತ್ತೊಬ್ಬ ಮುಂದುವರೆಸಿ 'ಈ ರೀತಿ ಇದ್ದೆ ಹೀಗೆ, ಇನ್ನೇನಾದರೂ ಸ್ವಲ್ಪ ಬೆಳ್ಳಗೆ, ತೆಳ್ಳಗೆ ಇದ್ದಿದ್ದ್ರೆ ಹಿಡಿಯೋಕ್ ಆಗ್ತಿರ್ಲಿಲ್ಲ' ಎಂದು ಈಗಷ್ಟೇ ಸುಂದರ ಹುಡುಗಿಯರ ಮಾತಿನ ಮೋಡಿಯಲ್ಲಿ ಮಿಂದೆದ್ದು ಬಂದ ಮೋಹದಲ್ಲಿ ಹೇಳುತ್ತಾನೆ. ಅಷ್ಟರಲ್ಲಾಗಲೇ ಸಿಟ್ಟಿನಿಂದ ಕುಪಿತಗೊಂಡಿದ್ದ ರಾಹುಲ್,
'ನಿನ್ನ ಅಕ್ಕನೋ ಅಮ್ಮನೋ ಅವಳ ಹಾಗೆ ಇದ್ದಿದ್ದರೆ ನೀನು ಈ ಮಾತನ್ನು ಹೇಳ್ತಾ ಇದ್ದೆಯಾ?! ಸ್ವಲ್ಪ ಮುಂಚೆ ಅಷ್ಟೂ ದಂತಪಂಕ್ತಿಯನ್ನು ತೋರುತ್ತಾ ನುಲಿಯುತ್ತಾ ಮಾತಾಡುತ್ತಿದ್ದೆಯಲ್ಲ ಅವರಲ್ಲಿ ಯಾರೊಬ್ಬರಿಗಾದರು ಸಾಹಿತ್ಯ, ಸಂಗೀತದ ಗಂಧ ಗಾಳಿ ಗೊತ್ತಿದೆಯೇ ಕೇಳು. ರಾಗ ಯಾವುದೆಂದು ಕೇಳಿದರೆ ಗೊತ್ತಿದ್ದರೆ ಹೇಳಬೇಕು, ಗೊತ್ತಿಲ್ಲದಿದ್ದರೆ ಸುಮ್ಮನಿರಬೇಕು. ಅದನ್ನು ಬಿಟ್ಟು ತಳ ಬುಡ ಇರದ ಉಢಾಫೆಯ ಉತ್ತರವನ್ನು ಕೇಳಿದರೆ ಸಂಗೀತವೇ ಸರ್ವಸ್ವ ಎಂದಂದುಕೊಂಡವರಿಗೆ ಸಿಟ್ಟು ಬರುವುದಿಲ್ಲವೇ? ಆಕೆ ಅಂದವಾಗಿಲ್ಲದಿರಬಹುದು ಆದರೆ ಆಕೆಯ ಜ್ಞಾನ ಸಂಪತ್ತು ನಮ್ಮೆಲ್ಲರಿಗಿಂತಲೂ ಅಂದವಾಗಿದೆ ಹಾಗು ಎತ್ತರದಲ್ಲಿದೆ. ಅದರಿಂದಲೇ ಅವಳ ಕಾನ್ಫಿಡೆನ್ಸ್ ನಿಮ್ಗೆಲ್ಲಾ ಆಟಿಟ್ಯೂಡ್ ನಂತೆ ಕಾಣೋದು' ಎನ್ನುತ್ತಾ ಅಲ್ಲಿಂದ ನೆಡೆಯುತ್ತಾನೆ.
ಅಂದಿನಿಂದ ರಾಹುಲ್ ಬೇಕಂತೆಲೆ ರೂಪಳ ಸಲುಗೆಯನ್ನು ಬಯಸತೊಡಗುತ್ತಾನೆ. ಓದು, ಸಾಹಿತ್ಯ, ಸಂಗೀತ ಹೀಗೆ ಎಲ್ಲದರದಲ್ಲೂ ಮುಂದಿದ್ದ ಆಕೆ ತನ್ನ ಚರ್ಮದ ಬಣ್ಣದಿಂದ ಮಾತ್ರವಷ್ಟೇ ಬೇಕು ಬೇಡವಾಗಿದ್ದಾಳೆಯೇ? ಬಣ್ಣ ಕಪ್ಪಾದ ಮಾತ್ರಕ್ಕೆ ನಾವು ಒಬ್ಬರನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆಯೇ? ಅವೊಂದು ಕಾರಣದಿಂದ ಮಾತ್ರವೇ ಆ ವ್ಯಕ್ತಿಯಲ್ಲಿನ ಬೇರೆಲ್ಲಾ ವಿಚಾರಗಳು ಗೌಣವಾಗುತ್ತವೆಯೇ? ಅಹಿರ್ ಭೈರವ ರಾಗವನ್ನು ಸತ್ತವರ ಮುಂದೆ ರೋಧಿಸುವ ಸದ್ದಿಗೆ ಹೋಲಿಸುವ ‘ಅಪ್ರಬುದ್ದತೆಯೇ’ ಸುಂದರತೆಯನ್ನು ಕೇವಲ ಬಿಳಿಯ ಬಣ್ಣದಿಂದ ಅಳೆಯುವಂತೆ ಮಾಡುತ್ತದೆಯೇ? ಆತ ಯೋಚಿಸತೊಡಗುತ್ತಾನೆ. ಪ್ರತಿಭಾರಿಯೂ ಆಕೆಯೊಟ್ಟಿಗಿನ ಭೇಟಿ ಅವನಿಗೆ ಹೊಸತೊಂದು ವಿಚಾರಗಳನ್ನು ಕಲಿಸತೊಡಗುತ್ತದೆ. ದಿನ ಕಳೆದಂತೆ ರೂಪ ರಾಹುಲ್ನ ಆಪ್ತ ಗೆಳತಿಯಲ್ಲೊಬ್ಬಳಾಗುತ್ತಾಳೆ.
ಆ ದಿನದ ನೇರಪ್ರಸಾರದ ಕಾರ್ಯಕ್ರಮದಲ್ಲಿ ರಾಹುಲ್ ಫೇರ್ ನೆಸ್ ಕ್ರೀಮ್ಗಳ ವಿರುದ್ಧವಾಗಿ ವಾದವೊಂದನ್ನು ಮಂಡಿಸುತ್ತಿರುತ್ತಾನೆ. ಕಪ್ಪಿರುವ ಚರ್ಮದ ಬಣ್ಣವನ್ನು ಬಿಳಿಯಾದಂತೆ ತೋರಿಸಿ ನೋಡುಗರಲ್ಲಿ ಕಪ್ಪು ಎಂದರೆ ಒಂದು ತಪ್ಪಿನ ಭಾವನೆ ಮೂಡುವಂತೆ ಇಂದು ಸಮಾಜ ಪರಿವರ್ತನೆಗೊಳ್ಳುತ್ತಿದ್ದೆ. ಇದಕ್ಕೆ ಬಹುಮುಖ್ಯ ಕಾರಣ ಇಂತಹ ಫೇರ್ ನೆಸ್ ಕ್ರೀಮ್ಗಳ ಜಾಹಿರಾತುಗಳು ಜೊತೆಗೆ ಹಣದ ಆಸೆಗೆ ಏನಕ್ಕೂ ಸೈ ಎನ್ನುವ ನಟ ನಟಿಯರು. ಇಂತಹ ಅರ್ಥಹೀನ ಜಾಹಿರಾತುಗಳನ್ನು ಕೂಡಲೇ ನಿಲ್ಲಿಸಬೇಕು.ಎಲ್ಲದಕ್ಕೂ ಮೊದಲು ಬದಲಾವಣೆ ಎಂಬುದು ನಮ್ಮೊಳಗೇ ಮೊದಲು ಬರಬೇಕು. ಇದು ಟಿವಿ ಸ್ಟುಡಿಯೋದಲ್ಲಿ ಕುಳಿತು ನಾವು ನೀವು ಚರ್ಚೆಮಾಡಿ ನಾಳೆ ಮರೆತುಹೋಗುವ ವಿಷಯವಂತೂ ಆಗಲೇ ಕೂಡದು.
ಇತ್ತಕಡೆ ರಾಹುಲ್ ನ ಸಾನಿಧ್ಯದಲ್ಲಿ ಅಕ್ಷರ ಸಹ ಅರಳಿದ ಹೂವಾಗಿದ್ದಂತಿದ್ದ ರೂಪಾಳ ಮನಸ್ಸು ಎಷ್ಟು ಆಶಾವಾದಿಯಾಗಿದ್ದಿತೋ ಅಷ್ಟೇ ಭಯಪೀಡಿತವೂ ಆಗಿದ್ದಿತು. ಎಲ್ಲಿಯಾದರೂ ಇದು ಪ್ರೀತಿ, ಪ್ರೇಮಕ್ಕೆ ತಿರುಗಿ ತನಗೆ ಆಶಾಭಂಗವಾಗುತ್ತದೆಯೋ ಎಂಬುದೇ ಆ ಭಯದ ಹಿಂದಿದ್ದ ಬಹುಮಖ್ಯ ಕಾರಣವಾಗಿದ್ದಿತು. ಆ ದಿನದ ನೇರಪ್ರಸಾರದ ಕಾರ್ಯಕ್ರಮದಲ್ಲಿ ರಾಹುಲ್ನ ವಾದವನ್ನು ಕಂಡು ಅಕ್ಷರ ಸಹ ನಲಿಯುವ ನವಿಲಿನಂತಾಯಿತು ಆಕೆಯ ಮನ. ತನಗರಿಯಂತೆ ರಾಹುಲ್ನನ್ನು ಮನಸ್ಸಾರೆ ಆಕೆ ಬಯಸತೊಡಗಿದಳು. ಆದರೂ ಎಲ್ಲೋ ಒಂದು ಬಗೆಯ ಅಂಜಿಕೆ, ಆತಂಕ ಅವಳಲ್ಲಿ. ಹೇಳುವವರು ಹಲವರಿರಬಹುದು ಆದರೆ ಹೇಳಿದಂತೆ ನಡೆದುಕೊಳ್ಳುವವರು ಕೆಲವರು ಮಾತ್ರ. ಆದೇನೇ ಆದರೂ ರಾಹುಲ್ ನನ್ನಂತಹ ಅಸುಂದರಿಯನ್ನು ಬಯಸನು. ಆತನ ಗುಣರೂಪಗಳಿಗೆ ಒಗ್ಗುವ ಹತ್ತಾರು ಸ್ಪುರದ್ರೂಪಿ ಹುಡುಗಿಯರು ಆತನಿಗೆ ಸಿಗಬಲ್ಲರು. ಏನಾದರಾಗಲಿ, ನಾನು ಮಾತ್ರ ಪ್ರೀತಿ ನಿವೇದನೆಯನ್ನು ಆತನ ಮುಂದೆ ಎಂದಿಗೂ ಮಾಡಲಾರೆ.ನನ್ನಂತವರು ಸುಂದರ ಹುಡುಗರನ್ನು ಬಾಳಸಂಗಾತಿಯಾಗಲು ಬಯಸಬಲ್ಲೆವಾ? ಸುಂದರ ಹೊರನೋಟವನ್ನು ಅಳೆಯುವಂತೆ ಮನಸ್ಸೆಂಬ ಒಳನೋಟವನ್ನು ಅಳೆಯುವ ಮಾಪನ ಯಾವುದು. ಮನಸ್ಸೆಂಬ ಒಳದೇಹವನ್ನು ಬಿಳುಪು ಮಾಡುವ ಫೇರ್ ನೆಸ್ ಕ್ರಿಮ್ ಎಂಬುದು ಯಾವುದು?!
ದಿನಗಳು ಕಳೆದರೂ ರೂಪ ತನ್ನ ಪ್ರೀತಿಯನ್ನು ರಾಹುಲ್ ನ ಬಳಿ ಹೇಳಿಕೊಳ್ಳುವುದೇ ಇಲ್ಲ. ಎಲ್ಲೋ ಒಂದೆಡೆ ಆಕೆಗೆ ರಾಹುಲ್ ಖುದ್ದಾಗಿಯೇ ಪ್ರೀತಿ ನಿವೇದನೆಯನ್ನು ಮಾಡುತ್ತಾನೆ ಎಂದನಿಸುತ್ತಿರುತ್ತದೆ. ಆದರೆ ಅದು ಎಂದಿಗೂ ಸಾಧ್ಯವಾಗುವತೆ ಕಾಣುವುದಿಲ್ಲ. ಪರೀಕ್ಷೆಯ ಸಮಯವಾದರಿಂದ ಎಲ್ಲರೂ ಓದಿನಲ್ಲಿ ಮಗ್ನರಾದರು, ರೂಪಾಳೊಬ್ಬಳನ್ನು ಬಿಟ್ಟು! ಪರೀಕ್ಷೆಯ ನಂತರ ವಿದ್ಯಾರ್ಥಿಗಳೆಲ್ಲ ರಜೆಗೆ ಮನೆಗೆ ಹೊರಡುವ ಮುನ್ನ ಕೊನೆಯ ಬಾರಿ ಸಿಗಲು ಕಾಲೇಜಿನ ಹುಲ್ಲುಹಾಸಿನ ಮೇಲೆ ಭೇಟಿಯಾದಾಗ ರೂಪ ರಾಹುಲ್ನಿಗಾಗಿ ಎರಡು ಪೇಂಟಿಂಗ್ಗಳನ್ನು ಪ್ಯಾಕ್ ಮಾಡಿ ತಂದಿದ್ದಳು. ಅವೆರಡನ್ನೂ ರಾಹುಲ್ನಿಗೆ ಕೊಟ್ಟು, ಒಂದು ಆತ ಆ ದಿನ ಕೇಳಿದ ಪೇಂಟಿಂಗ್ ಎಂದೂ ಮತ್ತೊಂದು ಅದಕ್ಕೆ ಪೂರಕವಾದ ಪೇಂಟಿಂಗ್ ಎಂದೂ ಎರಡನ್ನೂ ಅವನ ಕೈಯ ಮೇಲಿಡುತ್ತಾಳೆ. ಆಕೆಯ ಮಾತುಗಳಲ್ಲಿನ ಕಂಪನ ರಾಹುಲ್ಗೆ ಕಂಡುಬಂದರೂ ಆತ ಸುಮ್ಮನಾಗುತ್ತಾನೆ. ಆತ ಏನೋ ಕೇಳಬೇಕೆಂದುಕೊಂಡು ಪುನ್ಹ ಮೌನಿಯಾಗುತ್ತಾನೆ. ಏಕೋ ಆತನ ಮನ ರೂಪಾಳ ಸಾನಿಧ್ಯವಿರದೆ ಇರಲಾರದು ಎಂಬಂತೆ ಮಿಡಿಯತೊಡಗುತ್ತದೆ.
ಅಂತೂ ಎಲ್ಲರೊಂದಿಗೆ ಬೀಳ್ಕೊಟ್ಟು ಊರಿಗೆ ಬಂದ ರಾಹುಲ್ ಮೊದಲು ಮಾಡಿದ ಕೆಲಸವೆಂದರೆ ಎರಡೂ ಪೇಂಟಿಂಗ್ಗಳನ್ನು ಬಿಚ್ಚಿ ನೋಡುವುದು. ಮೊದಲನೆಯ ಪೇಂಟಿಂಗ್ ಅಂದಿನ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ್ದ ಚಿತ್ರವಾಗಿಯೇ ಇದ್ದಿತು. ಕಪ್ಪುಬಣ್ಣದ ಹುಡುಗಿಯಿಬ್ಬಳು ಶ್ವೇತವರ್ಣದ ಬಟ್ಟೆಯನ್ನು ಧರಿಸಿ ಕಣ್ಣು ಹಾಗು ಬಾಯಿಯಷ್ಟನ್ನೇ ಬಟ್ಟೆಯಿಂದ ಕಟ್ಟಿಕೊಂಡು ಜನಜಂಗುಳಿಯ ನಡುವಿನಲ್ಲಿ ನಿಂತಿರುವಂತಹ ಚಿತ್ರ. ಮತ್ತೊಂದು ಸಂಪೂರ್ಣ ಬಿಳಿಯ ಹಾಳೆಯ ಮೇಲೆ ಕಪ್ಪುಬಣ್ಣದ ಗುಲಾಬಿ! ಕೆಲಕಾಲ ಹಾಗೆಯೆ ಅವುಗಳನ್ನು ನೋಡುತ್ತಾ ಕುಳಿತ ರಾಹುಲ್ನಿಗೆ ಚಿತ್ರಪಟಗಳ ಅರ್ಥ ಅರಿಯತೊಡಗುತ್ತದೆ. ಇದ್ದಕಿದ್ದಂತೆ ಆತನ ಕಣ್ಣುಗಳು ತೇವವಾದವು. ಅಂದುಕೊಂಡಂತೆ ಆ ಎರಡೂ ಚಿತ್ರಪಟಗಳ ರಚನಾಕಾರರು ರೂಪಳೇ ಆಗಿರುತ್ತಾಳೆ! ಮಾತುಗಳು ಬಣ್ಣಿಸದ್ದನು ಚಿತ್ರಪಟವೊಂದು ರಾಹುಲ್ನಿಗೆ ತಿಳಿಸುತ್ತದೆ! 'ಹುಚ್ಚು ಹುಡುಗಿ' ಎಂದು ನಗುತ್ತಾ ರಾಹುಲ್ ಅಂದೇ ರೂಪಾಳ ಊರಿಗೆ ಪ್ರಯಾಣ ಬೆಳೆಸುತ್ತಾನೆ.
ವರ್ಷಗಳು ಕಳೆದವು. ಗಂಧದಿಂದ ತೇಯ್ದು ಮಾಡಿರುವಂತಿರುವ ದೇಹಸೇರಿಯ ಮಗುವೊಂದು ಕಪ್ಪುವರ್ಣದ ಮತ್ತೊಂದು ಮಗುವಿನೊಟ್ಟಿಗೆ ಕಡಲತೀರದಲ್ಲಿ ಆಡುತ್ತಾ ಕುಳಿತ್ತಿದ್ದಿತು. ಕಪ್ಪು-ಬಿಳುಪು, ಮೇಲು-ಕೀಳು, ಬಡವ-ಬಲ್ಲಿದ ಎಂಬ ಭೇದಭಾವಗಳಿರದ ಮಕ್ಕಳಂತೆಯೇ ಸಮುದ್ರದ ಅಲೆಗಳು ಒಂದರಿಂದೊಂದು ಅವುಗಳನ್ನು ಅಪ್ಪಳಿಸುತ್ತಿದ್ದವು. ಕೊಂಚ ಸಮಯದಲ್ಲಿಯೇ ಕಪ್ಪುವರ್ಣದ ಮಗುವಿನ ಅಮ್ಮ ತನ್ನ ಮಗುವನ್ನು ಕರೆದುಕೊಂಡು ಹೋಗಲು ಬಂದಾಗ ಯಾರೋ ತನ್ನ ಅತ್ಯಾಪ್ತವಾದ ಆಟಿಕೆಯನ್ನು ಕಸಿದುಕೊಂಡಂತೆಯೇ ಆ ಮಗು ಅಳತೊಡಗುತ್ತದೆ. ಅದು ಅಳುವುದನ್ನು ನೋಡಿ ಅಮ್ಮನ ಕಂಕುಳದಲ್ಲಿದ್ದ ಮಗುವೂ ಅಳಲು ಶುರುಮಾಡುತ್ತದೆ. 'ಎಂಥಾ ಮುಗ್ದತೆ ಅಲ್ವ...?' ಎಂದ ರೂಪ ನಿಸರ್ಗಮಯ ಆ ದೃಶ್ಯವನ್ನು ನೋಡಿ ರಾಹುಲ್ನ ಹೆಗಲಮೇಲೆ ತನ್ನ ತಲೆಯನ್ನು ಇರಿಸಿದಳು. 'ಹೌದು, ಮಾನವ ಹುಟ್ಟುವಾಗ ಮುಗ್ದ ಪ್ರಾಣಿಯಾಗಿಯೇ ಹುಟ್ಟುತ್ತಾನೆ. ಸಮಾಜ ಆ ಮುಗ್ದತೆಯನ್ನು ಪೋಷಿಸಿ ಬೆಳೆಸುವುದ್ರಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತೆ . ಸಮಾಜವನ್ನು ನಾವು ಬದಲಾಹಿಸಲಾಗದು. ಬದಲಾವಣೆ ಮೊದಲು ನಮ್ಮ ಮನದಲ್ಲೇ ಬರಬೇಕು' ಎನುತ್ತಾನೆ. ಅಷ್ಟರಲ್ಲಿಯೇ ತಾನು ಒಬ್ಬಂಟಿಯಾದರಿಂದ 'ಅಮ್ಮಾ...' ಎಂದು ಬಿಕ್ಕಳಿಸಿ ಅಳುತ್ತಾ ಬಂದ ಮಗು ರೂಪಳ ತೊಡೆಯ ಮೇಲೆ ಗೋಗರೆಯುತ್ತದೆ. ತಮ್ಮ ಮಗುವಿನ ನಿರ್ಮಲ ಪ್ರೀತಿಗೆ ಸೋತೋ ಏನೊ ರಾಹುಲ್ ಹಾಗು ರೂಪಾರಿಬ್ಬರ ಕಣ್ಣುಗಳು ಹನಿಗೂಡುತ್ತವೆ....

No comments:
Post a Comment